
Swami Vivekananda Guru (Kannada)
About this book
ಅಪ್ರತಿಮ ಗುರು, ಅದ್ಭುತ ಶಿಷ್ಯಈ ಪುಸ್ತಕದ ಮೂಲಕ, ನೀವು ಸ್ಫೂರ್ತಿ ಪಡೆದುಕೊಳ್ಳಬಹುದಾದ ಒಂದು ಮಹಾನ್ ವ್ಯಕ್ತಿತ್ವದ ಜೀವನವನ್ನು ನಾವು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ. ಇವರೇ ಸ್ವಾಮಿ ವಿವೇಕಾನಂದರು. ಇವರ ಜೀವನಚರಿತ್ರೆಯು ನಿಮ್ಮ ಜೀವನಕ್ಕೆ ಅಡಿಪಾಯವಾಗಬಹುದು. ನಿಮ್ಮ ಜೀವನಕ್ಕೆ ಇಂತಹ ಒಂದು ಬಲವಾದ ಅಡಿಪಾಯ ಸಿಕ್ಕರೆ, ನಿಮ್ಮ ಜೀವನವೂ ಕೂಡ ಬಲಶಾಲಿಯಾಗುತ್ತದೆ.ಸ್ವಾಮಿ ವಿವೇಕಾನಂದರ ಅಪ್ರತಿಮ ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರು ಅವರ ಜೀವನದ ಅಡಿಪಾಯವಾಗಿದ್ದರು. ಸ್ವಾಮಿ ವಿವೇಕಾನಂದರ ಜೀವನವು ಅವರ ಗುರುಭಕ್ತಿಗೆ ಒಂದು ದೊಡ್ಡಉದಾಹರಣೆಯಾಗಿದೆ. ಶ್ರೀ ರಾಮಕೃಷ್ಣ ಪರಮಹಂಸರ ಬಳಿಗೆ ಬಂದನAತರ ವಿವೇಕಾನಂದರ ಪರಮಸತ್ಯದ ಅನ್ವೇಷಣೆ ಪೂರ್ಣವಾಯಿತು ಮತ್ತು ಅವರು ತಮ್ಮ ಗುರುಗಳ ಬೋಧನೆಗಳನ್ನು ಪ್ರಪಂಚದಾದ್ಯAತ ಪಸರಿಸಿದ ಅದ್ಭುತ ಶಿಷ್ಯರಾದರು.ಇಂದಿನ ಯುವಕರಿಗೆ ಸ್ವಾಮಿ ವಿವೇಕಾನಂದರು ಸ್ಫೂರ್ತಿಯ ಸೆಲೆ ಮತ್ತು ಮಾದರಿಯಾಗಿದ್ದಾರೆ. ಅವರ ಆತ್ಮಬಲ ಇಂದಿನ ಯುವಪೀಳಿಗೆಗೆ ಒಂದು ಉದಾಹರಣೆಯಾಗಿದೆ. ಅವರ ಕೆಲಸ ಮತ್ತು ಬೋಧನೆಗಳು ಇಂದಿಗೂ ಯುವಜನತೆಯನ್ನು ಸತ್ಯದ ಮಾರ್ಗದಲ್ಲಿ ನಡೆಯಲು ಮತ್ತು ಪ್ರತಿಫಲದ ನಿರೀಕ್ಷೆಯಿಲ್ಲದೆ ಸೇವೆ ಮಾಡಲು ಕಲಿಸುತ್ತವೆ. ನೀವು ಸತ್ಯದ ಅನ್ವೇಷಕರಾಗಿದ್ದರೆ, ಈ ಪುಸ್ತಕವು ನಿಮ್ಮನ್ನು ಶಿಷ್ಯರಾಗಲು ಪ್ರೇರೇಪಿಸುತ್ತದೆ. ನೀವು ಶಿಷ್ಯರಾಗಿದ್ದರೆ, ಈ ಪುಸ್ತಕವು ನಿಮಗೆ ಭಕ್ತನಾಗುವ ಮಾರ್ಗವನ್ನು ತೋರಿಸುತ್ತದೆ. ನೀವು ಭಕ್ತರಾಗಿದ್ದರೆ ಈ ಪುಸ್ತಕವು ನಿಮ್ಮ ಭಕ್ತಿಯ ಅಭಿವ್ಯಕ್ತಿಯನ್ನು ತೋರ್ಪಡಿಸಲು ಕಲಿಸುತ್ತದೆ. ನೀವು ಭಕ್ತಿಯ ಅಭಿವ್ಯಕ್ತಿಯನ್ನು ತೋರ್ಪಡಿಸುತ್ತಿದ್ದರೆ, ಖಂಡಿತವಾಗಿಯೂ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯು ನಿಮ್ಮೊಳಗೆ ನಿಸ್ವಾರ್ಥ ಜೀವನದ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ... ನಿಮ್ಮ ಮುಂದಿನ ಬೆಳವಣಿಗೆಗಾಗಿ ಖಂಡಿತವಾಗಿಯೂ ಇದನ್ನು ಓದಿರಿ.
Details
| ISBN | 9788169572071 |
| Format | Paperback |
| Audience | Adults |
More from Nonfiction

Thoughts from the Mount of Blessing

Thinking, Fast and Slow

What Do I Know

Embrace the Hard

The Rootless Elysium

The New Social Code

How to Be Wretched

Stop Talking, Start Communicating: Includes the Disc Assessment

Beauty of the Beasts

Down South + East

The Antwerp Six

Original Sin
Listen free
See all ›Where readers lift readers.
See our refund policy
[email protected]
